Thursday, October 21, 2010

ಅವಳೊಳಗೆ


ಕೊಟ್ಟಾಗಿದೆ ಮನಸ್ಸನ್ನು .................
ಕ್ಷಣದ ಸಿಟ್ಟಿಗೆ ಸಿಕ್ಕು ಸಂಬಂಧ ಮುರಿದುಕೊಂಡರೆ
ಬದುಕಿನುದ್ದಕ್ಕೂ ಅದಕ್ಕಾಗಿ ಕನವರಿಸಬೇಕಾಗಬಹುದೇನೋ ಎಂಬ ಭಯ.

ಕವಲು ಹಾದಿಯಲ್ಲ ಇದು.
ಕಾಲು ಹಾದಿ............ ಪ್ರತಿ ಹೆಜ್ಜೆಗೂ ಚುಚ್ಚುತ್ತಿದೆ
ಮುಳ್ಳುಗಳು.............
ಕಾಲೆತ್ತಿ ಕತ್ತು ಮುಂದೆಮಾಡಿ ನೋಡುತ್ತೇನೆ
ಇತರರ ಹಾದಿಯೂ ಹೀಗೇಯೇ ಎಂದು ..........
ಪ್ರಯೋಜನವಿಲ್ಲ............ ಇವೆಲ್ಲಿ ಕಾಣುತ್ತವೆ..
ನೆಡೆದ ಮೇಲಲ್ಲವೆ ಚುಚ್ಚುವುದು............

ಇಳಿದಿದ್ದಾಗಿದೆ ನೀರಿಗೆ .........
ಎಲ್ಲರಿಗೂ ಹೇಳಿಯೇ........
ಒಮ್ಮೆ ಬೇಡವೆಂದು ಸಣ್ಣಗೆ ಉಸುರಿದರು.
ಮತ್ತೊಮ್ಮೆ ಮೌನವಾದರು.. ಮಗದೊಮ್ಮೆ ಇಳಿದು ಬಿಡು ಎಂದು ಕುಮ್ಮಕ್ಕು ಕೊಟ್ಟಿದ್ದು ಇದೆ.......
ಆದರೆ ಯಾರೂ ಕೈ ಹಿಡಿದು ಎಳೆದವರಿಲ್ಲ ............ ಇಳಿಯಲು ಹೊರಟವಳ......

ಇಳಿಯುವಾಗ ಪಾದ ಮುಚ್ಚುವಷ್ಟಿತ್ತು ನೀರು..............
ಈಗ ಎಲ್ಲಿ ನೋಡಿದರೂ ಗುಂಡಿ ...............
ದಿಕ್ಕೆ ತೋಚುತ್ತಿಲ್ಲ......ಹಿಮ್ಮೆಟ್ಟುವ ಹೇಡಿತನ ಬೇಕಿಲ್ಲ.
ಈಸಬೇಕಿದೆ...........ಈಸಲೇಬೇಕೇ???
ಈಸಬಲ್ಲೆನೆ.........?? ಇಲ್ಲವೇ ಕಂಡವರ ಬಾಯಲ್ಲಿ................................!!

ಮನಸು ಕೊಟ್ಟವನ ಕೈಗೆ ಬದುಕನ್ನಿಟ್ಟು ಸುಮ್ಮನಾಗಲೇ.................?
ಹಾಗಾದರೆ 



                                                        ............................ RAJA